ವೆಸ್ಟರ್ನ್ ಆಸ್ಟ್ರೇಲಿಯಾ ಕನ್ನಡ ಸಂಘ (ನೋ)

ಸಿರಿಗನ್ನಡಂ ಗೆಲ್ಗೆ - ಸಿರಿಗನ್ನಡಂ ಬಾಳ್ಗೆ

Western Australia Kannada Sangha (Inc.)

SIRI KANNADAM GELGE - SIRI KANNADAM BALGE
Kannada Shaale Teachers

ಕನ್ನಡ ಶಾಲೆ ಶಿಕ್ಷಕರು

Please find below our Kannada Shaale teachers.

ಪ್ರಧಾನ ಶಿಕ್ಷಕಿ - Principal

ಸುಚರಿತ ರವಿ

ಸುಚರಿತ ರವಿ

Sucharita Ravi

 

ನಾನು ಶಾಲೆಯಲ್ಲಿ ಕಲಿಯುತಿದ್ದಾಗ ನಮ್ಮ ಕನ್ನಡ ಟೀಚರ್ ಎಷ್ಟು ಅದ್ಭುತವಾಗಿ ಪಾಠ ಮಾಡುತಿದ್ದರೆಂದರೆ, ನಾನೂ ಕನ್ನಡ ಟೀಚರ್ ಆಗಬೇಕೆಂದು ಆಶಿಸುತಿದ್ದೆ. ಜೀವನ ಅದರದ್ದೇ ದಾರಿಯಲ್ಲಿ ಕರೆದುಕೊಂಡು ಹೋಗಿ, ನಾನು applied genetics ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಜೆನೆಟಿಕ್ಸ್ ಅಧ್ಯಾಪಕಿಯಾದೆ. ಪರ್ತ್ನಲ್ಲಿ ಕನ್ನಡ ಶಾಲೆ ಶುರುಮಾಡಲು ಕನ್ನಡ ಸಂಘ ತೀರ್ಮಾನಿಸಿದಾಗ ನನ್ನ ಕನಸಿಗೆ ಜೀವ ಬಂತು. ಈಗ 5 ವರ್ಷಗಳ ಮೇಲಾಯಿತು, ಆದರೆ ಇಂದಿಗೂ ಮಕ್ಕಳ ಒಡನಾಟ ಇನ್ನಿಲ್ಲದ ಸಂತಸ ನೀಡುತ್ತದೆ. ಪಾಠ ಮಾಡುವುದು ನನಗೂ ಕಲಿಕೆಯ ಒಂದು ಅವಕಾಶವಾಗಿದೆ. ಇಂದು ನಮ್ಮ ಕೆಲವು ವಿದ್ಯಾರ್ಥಿಗಳು ಅಲ್ಪ ಸ್ವಲ್ಪ ಓದುವ ಮಟ್ಟಕ್ಕೆ ಕನ್ನಡ ಕಲಿತಿದ್ದು, ಪೂರ್ತಿ ಓದುವ ದಿನ ದೂರವಿಲ್ಲ ಎಂಬುದು ಹೆಮ್ಮೆಯ ವಿಚಾರ. ನಮ್ಮ ಶಾಲೆ ಇನ್ನೂ ಬೆಳೆದು ಹೊರದೇಶದಲ್ಲಿ ಬೆಳೆಯುವ ಮಕ್ಕಳಿಗೆ ಕನ್ನಡ ಎಂದೂ ದೂರಾಗದಂತೆ ಸಹಾಯ ಮಾಡಲಿ ಎಂದು ಆಶಿಸುತ್ತೇನೆ. ಪ್ರಮಾಣ ಪತ್ರ : First Aid Course, Lesson Planning Course, How to teach well course. ಪರವಾನಗಿ : Working With Children


ಶಿಕ್ಷಕರು - Teachers

ಮಿಲನ ಅರುಣ್ ಕುಮಾರ್

ಮಿಲನ ಅರುಣ್ ಕುಮಾರ್

Milana ArunKumar

 

ನನ್ನ ಹೆಸರು ಮಿಲನ ಅರುಣ್ ಕುಮಾರ್ , ಹುಟ್ಟಿ ಬೆಳೆದಿದ್ದು ಹಾಗೂ ವ್ಯಾಸಂಗ ಮಾಡಿದ್ದು ಎಲ್ಲವೂ ಬೆಂಗಳೂರಿನಲ್ಲೇ. ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಓದಿದ್ರು ನಮ್ಮ ಕನ್ನಡ ಭಾಷೆ ನನ್ನ ಮಾತೃ ಭಾಷೆ ಕಲಿಯಲು ಹಾಗೂ ಬರೆಯುವದರಲ್ಲಿ ಆಸಕ್ತಿ ಹೆಚ್ಚು. ನಾನು ಹೆಚ್ಚಾಗಿ ಅಂಕಗಳನ್ನು ಗಳಿಸುತ್ತಿದದು ಕನ್ನಡ ವಿಷಯದಲ್ಲಿ ಹಾಗೂ ನನ್ನ ಇಡೀ ಶಾಲೆಗೆ 10ನೇ ತರಗತಿಯಲ್ಲಿ ಕನ್ನಡ ವಿಷಯದ ಟಾಪರ್ ನಾನೇ. ನನ್ನ ಅಮ್ಮ ಹೆಚ್ಚಾಗಿ ನನಗೆ ಪಾಠವನ್ನು/ ಕಥೆಯನ್ನು ಹೇಳುವ / ಪುಸ್ತಕವನ್ನು ಓದುತ್ತಿದ್ದರು ನನ್ನ ಕೆಲಸ, ಕೇವಲ ಅವರನ್ನು ಆಲಿಸಿ ಬರೆಯುವುದಾಗಿತ್ತು .ಈ ಮೂಲಕ ನನ್ನ ಈ ಭಾಷ ಅಭಿಮಾನಕ್ಕೆ, ಒಲವಿಗೆ, ನನ್ನ ಈ ಶಿಕ್ಷಣ ವೃತ್ತಿಗೆ ನನ್ನ ಅಮ್ಮ ನೇ ಸ್ಪೂರ್ತಿ. ಪರ್ತ್ ಗೆ ಬಂದಾಗಲಿಂದಲೂ ಮಕ್ಕಳಿಗೆ ಕಲೆ/ಕರಕುಶಲ/ ಕನ್ನಡ ಕಲಿಸುವ ಆಸೆ ಇತ್ತು , ಆದರೆ ಆ ಕನಸು WAKS ನ ಕನ್ನಡ ಶಾಲೆಯ ಮೂಲಕ ನೆರವೇರಿತು. ತನ್ನ ಬೇರುಗಳನ್ನು ಬಲವಾಗಿ ಹೊಂದಿರುವ ಈ ಕನ್ನಡ ಭಾಷೆಯನ್ನು ಮಕ್ಕಳಿಗೆ ಪ್ರೀತಿಯಿಂದ ಕಲಿಸುವ ಹಾಗೂ ಕನ್ನಡತಿಯಾಗಿ ನಮ್ಮ ಶ್ರೀಮಂತ ಭಾಷೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದರಲ್ಲಿ ಏನೋ ಖುಷಿ. ಪರವಾನಿಗೆ : Work With Children​


ತ್ರಿಶಲಾ ತ ದಂಡಾವತಿ ​

Trishala T Dandavati

 

ಹೊರದೇಶದಲ್ಲಿರುವ ಕರುನಾಡ ಮಕ್ಕಳಿಗೆ ನಮ್ಮ ಮಾತೃಭಾಷೆ ಕನ್ನಡವನ್ನು ಹೇಳಿ ಕೊಡುವುದು ನನಗೆ ಹೆಮ್ಮೆಯ ವಿಷಯ. ನಮ್ಮ ಕನ್ನಡ ಶಾಲೆಯಲ್ಲಿ ಕನ್ನಡ ಭಾಷೆಯನ್ನು ಬರೆಯುವದು, ಓದುವದು, ಮಾತನಾಡುವದನ್ನು ಹೇಳಿಕೊಡುವದರ ಜೊತೆಗೆ ಭಾರತದ ಸಂಸ್ಕೃತಿ, ಹಬ್ಬಗಳ ಮಹತ್ವವನ್ನು ತಿಳಿಸಿ ಕೊಡುತ್ತೇವೆ. ಮಾತೃಭಾಷೆಯನ್ನು ತಿಳಿದುಕೊಳ್ಳುವುದು ಅವರ ಹಕ್ಕು, ಅದಕ್ಕೆ ಬೇಕಾದ ಸಹಾಯವನ್ನು ಮಾಡುವ ಕರ್ತವ್ಯ ನಮ್ಮದು. ಪ್ರತಿ ತರಗತಿಯಲ್ಲಿಯೂ ಮಕ್ಕಳು ಹೊಸ ಶಬ್ದಗಳನ್ನು, ಹೊಸದಾಗಿ ಹಳೆಯ ಆಟಗಳನ್ನು ಕಲಿತಾಗ ಎಲ್ಲಿಲ್ಲದ ಖುಷಿ ಆಗುತ್ತದೆ. ಅಕ್ಷರಗಳನ್ನು ಜೋಡಿಸಿ ಓದಿದರೆ ಸಾಧನೆ ಮಾಡಿದಷ್ಟೇ ತೃಪ್ತಿ. ಅವರೊಟ್ಟಿಗೆ ನಾನೂ ಸಾಕಷ್ಟು ವಿಷಯಗಳನ್ನು ಕಲಿಯತ್ತಿರುವೆ. ಕನ್ನಡ ಶಾಲಾ ಶಿಕ್ಷಕಿಯಾಗಿರುವುದು ವೈಯಕ್ತಿಕವಾಗಿ ನನಗೆ ಇದು ಆಸಕ್ತಿಕರ ಸಂಗತಿಯೂ ಆಗಿದೆ. ಸರ‍್ಟಿಫೀಕೇಟ : ಪ್ರಥಮ ಚಿಕಿತ್ಸಾ ತರಬೇತಿ​. ಪರವಾನಿಗೆ : Work With Children​

ತ್ರಿಶಲಾ ತ ದಂಡಾವತಿ ​

ವೀಣಾ ಗುಬ್ಬಿ

ವೀಣಾ ಗುಬ್ಬಿ

Veena Gubbi

 

ಆಸ್ಟ್ರೇಲಿಯಾ ದೇಶದಲ್ಲಿ ನನ್ನ ವಾಸ ಪ್ರಾರಂಭವಾಗಿ ಮೂರು ದಶಕಗಳು ಮೀರಿದೆ. ಹೊರದೇಶದಲ್ಲಿ ಬೆಳೆಯುತ್ತಿರುವ ನಮ್ಮ ಮುಂದಿನ ಪೀಳಿಗೆಗೆ ಕನ್ನಡ ಭಾಷೆಯನ್ನು ಒಂದು ರಚನಾತ್ಮಕ ಚೌಕಟ್ಟಿನಲ್ಲಿ ಕಲಿಸಿ ಬೆಳಸಲು ಅನುವು ಮಾಡುತ್ತಿರುವ ಕನ್ನಡ ಶಾಲೆಯ ಪಾತ್ರ, ಪ್ರಯತ್ನ ಶ್ಲಾಘನೀಯ. ಈ ನಿಟ್ಟಿನಲ್ಲಿ ಶಿಕ್ಷಕ ಪರಿಸರದಲ್ಲಿ ಬೆಳೆದು ಅಧ್ಯಾಪಕಿಯಾಗಿದ್ದ ನನಗೆ ನನ್ನ ಅನುಭವವನ್ನು ಪುನಃ ಈ ದೇಶದಲ್ಲಿ ಕನ್ನಡ ಶಾಲೆಯ ಶಿಕ್ಷಕಿಯಾಗಿ ಹಂಚಿಕೊಳ್ಳಲು ಅವಕಾಶ ದೊರೆತಿರುವುದು ಸಂತೋಷದ ಸಂಗತಿ. ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಅಭಿರುಚಿ ಬೆಳೆಸುವುದು ನಮ್ಮ ಶಾಲೆಯ ಮುಖ್ಯ ಉದ್ದೇಶ. ಪರವಾನಿಗೆ : Work With Children​


ಪೋಷಕ ಶಿಕ್ಷಕರು - Supporting Teachers

ವಸುಂಧರ ಶಿವರಾಂ

ವಸುಂಧರ ಶಿವರಾಂ

Vasundhara Shivaram

 

ನನ್ನ ಹೆಸರು ವಸುಂಧರಾ ಶಿವರಾಂ. ನಾನು ಈಗ ಮೂವತ್ತು ವರ್ಷದಿಂದ ಆಸ್ಟ್ರೇಲಿಯಾ ದೇಶದಲ್ಲಿದ್ದೇನೆ. ಆ ಸಮಯದಲ್ಲಿ, ಪರ್ತ್ ನಲ್ಲಿ ಕನ್ನಡಿಗರ ಸಂಖ್ಯೆ ಬಹಳ ಕಡಿಮೆ ಇತ್ತು. ಹಾಗಾಗಿ ಕನ್ನಡ ಸಂಘ, ಕನ್ನಡ ಶಾಲೆ ಯಾವುದು ಇರಲಿಲ್ಲ. ಭಾಷೆ ಉಳಿಸಿ ಬೆಳೆಸಲು ಕನ್ನಡ ಶಾಲೆ ಅವಶ್ಯಕ.ಈಗ ಆ ಪ್ರಯತ್ನ ನಡೆದಿದೆ. ಕನ್ನಡತಿಯಾಗಿ ನನ್ನ ಅಳಿಲು ಸೇವೆ ಸಲ್ಲಿಸಲು ನನಗೆ ಇದೊಂದು ಸದಾವಕಾಶ. ಹಾಗೂ, ಮಕ್ಕಳ ಜೊತೆ ಬೆರೆತು ಅವರ ಉತ್ಸಾಹ, ಕಲಿಯುವ ಹುಮ್ಮಸ್ಸು, ಉತ್ತೇಜಿಸಲು ಸಹಾಯವಾಗುತ್ತದೆ. ಪರವಾನಿಗೆ : Work With Children.


ಪ್ರಶಾಂತ್ ವೆಂಕಟಾಚಲ

Prashanth Venkatachala

 

ಪ್ರಶಾಂತ್ ವೆಂಕಟಾಚಲ

ಗುರುಪ್ರಸಾದ್ ಗುಪ್ತಾ

ಗುರುಪ್ರಸಾದ್ ಗುಪ್ತಾ

Guruprasad Gupta

 


ಜಯಶ್ರೀ

Jayashree

 

ಜಯಶ್ರೀ

ಮಾಜಿ ಶಿಕ್ಷಕರು - Former Teachers

ಮಾಜಿ ಶಿಕ್ಷಕರು

ಮಾಜಿ ಶಿಕ್ಷಕರು

Former Teachers

 

ಒಬ್ಬ ಉತ್ತಮ ಶಿಕ್ಷಕಿ/ಶಿಕ್ಷಕನು ಮೇಣದಬತ್ತಿಯಂತೆ - ಅದು ಇತರರಿಗೆ ದಾರಿಯನ್ನು ಬೆಳಗಿಸಲು ತನ್ನನ್ನು ತಾನು ಬಳಸಿಕೊಳ್ಳುತ್ತದೆ ಹಾಗೆ ಆ ಶಿಕ್ಷಕಿ/ಶಿಕ್ಷಕನ ಬೋಧನೆಯು ಮಕ್ಕಳ ಪಾತ್ರವನ್ನು, ಸಾಮರ್ಥ್ಯವನ್ನು ಮತ್ತು ಭವಿಷ್ಯವನ್ನು ರೂಪಿಸುವ ಅತ್ಯಂತ ಉದಾತ್ತ ವೃತ್ತಿಯಾಗಿರುತ್ತದೆ. ಮಕ್ಕಳು ಅವರನ್ನು ಉತ್ತಮ ಶಿಕ್ಷಕ ಎಂದು ನೆನಪಿಸಿಕೊಂಡರೆ, ಅದು ಅವರಿಗೆ ಸಲ್ಲುವ ದೊಡ್ಡ ಗೌರವ. ಇಂತಹ ಎಲ್ಲ ಮಾಜಿ ಶಿಕ್ಷಕಿ/ಶಿಕ್ಷಕರು WAKS ಕನ್ನಡ ಶಾಲೆಗಾಗಿ ಕಷ್ಟಪಟ್ಟು ಕೆಲಸ ಮಾಡಿದ್ದಕ್ಕಾಗಿ ಮತ್ತು ಬದಲಾವಣೆಯನ್ನು ತಂದಿದ್ದಕ್ಕಾಗಿ ಧನ್ಯವಾದಗಳು. A good teacher is like a candle – it uses itself to light the way for others. Thus, the teacher's teaching is the most noble profession that shapes the role, potential and future of children. If children remember him/her as a good teacher, it is a great honor. "Thank You" to all such former teachers for working hard for WAKS Kannada Shaale and bringing about a change.